Bhasaka
← Back to home

ಹಾಕಿದ ಜನಿವಾರವ ಸದ್ಗುರುನಾಥ

Author: ಶಿಶುನಾಳ ಷರೀಫ್Category: ಶ್ರೀಗುರು
ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ ಹಾಕಿದ ಜನಿವಾರವ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ಸಂಧ್ಯಾವಂದನೆ ಕಲಿಸಿ ಆನಂದದಿ ಬಿಂದು ವರ್ಗವ ನಿಲಿಸಿ ನಂದಿಸಿ ಮನಸನು ಆತ್ಮ ಜಲದಲಿ ಎಂದೆಂದಿಗೂ ಯಮದುಂದುಗವಳಿಯೆಂದು || ಕಂಡ ಕಂಡವರೊಡನೆ ಅಲೆದಿ ಧರ್ಮಲಂದ ರಜತೆ ಯಾಕೆ ಬೆರದಿ? ಪುಂಡ ನಿತನ ನೂಕು ಎಂದು ನಿಂದಿಸೆ ಗುರುಗಂಡೆಂದರೀತನೆ ನೀವಲ್ಲಛೀ ಎಂದು || ಶಿಶುನಾಳಧೀಶ ಗುರು ತನ್ನೊಡಲೊಳು ವಶವಾದ ಸೂತ್ರವನು ನಸುನಗುತಲಿ ತೆಗೆದಲ್ಲಿಯೆ ತೊಡಿಸಿದ ಉಸುರಿದ ಮಂತ್ರವ ಹೊಸಬನ ಮೂಡುತ ||

Thoughts & Reflections

0

No reflections shared yet. Be the first to share your thoughts!

Share your thought