Bhasaka
← Back to home

ಗುಡಿಯ ನೋಡಿರಣ್ಣಾ ದೇಹದ

Author: ಶಿಶುನಾಳ ಷರೀಫ್Category: ವೈರಾಗ್ಯ
ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ಗುಡಿಯ ನೋಡಿರದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ || ಮೂರು ಮೂಲಿಯ ಕಲ್ಲು ಅದನು ಏರಿ ಕೂತು ಡೊಳ್ಳು, ಧೀರ ನಿರ್ಗುಣನ ಸಾರ ಸಗುಣದಲಿ ತೋರಿ ಅಡಗಿ ತಾ ಬ್ಯಾರಾಗಿರುತಿಹ || ಆರು ಮೂರು ಕಟ್ಟಿ ಮೇಲಕೆ ಏರಿದವನೆ ಘಟ್ಟಿ, ಭೇರಿ ಕಹಳಿ ಶಂಖ ಭಾರಿಸುನಾದದಿ ಮೀರಿದಾನಂದ ತೋರಿ ಹೊಳೆಯುತಿಹ || ಸಾಗುತಿಹವು ದಿವಸ ಸೇವಿಸಿ ತೇಗಿ ಹೊಳಿಗಿ ಪಾಯಸ, ಯೋಗಿರಾಜ ಶಿಶುನಾಳಧೀಶ ತಾನಾಗಿ ಪರತ್ಪರ ಬ್ರಹ್ಮರೂಪನಿಹ ಗುಡಿಯ ನೋಡಿರಣ್ಣಾ ||

Thoughts & Reflections

0

No reflections shared yet. Be the first to share your thoughts!

Share your thought