Bhasaka
← Back to home

ಜಗದೋದ್ಧಾರನ ಆಡಿಸಿದಳೆಶೋದೆ

Author: ಪುರಂದರದಾಸCategory: ಶ್ರೀಕೃಷ್ಣ
ಜಗದೋದ್ಧಾರನ ಆಡಿಸಿದಳೆಶೋದೆ || ಪ || ಜಗದೋದ್ಧಾರನ ಮಗನೆಂದು ತಿಳಿಯುತ ಸುಗುಣಾಂತ ರಂಗನ ಆಡಿಸಿದಳೆಶೋದೆ || ಅ.ಪ || ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ || ೧ || ಅಣೋರಣೀಯನ ಮಹತೋ ಮಹಿಮನ ಅಪ್ರಮೇಯನ ಆಡಿಸಿದಳೆಶೋದೆ || ೨ || ಪರಮ ಪುರುಷನ ಪರವಾಸುದೇವನ ಪುರಂದರ ವಿಠಲನ ಆಡಿಸಿದಳೆಶೋದೆ || ೩ ||

Thoughts & Reflections

0

No reflections shared yet. Be the first to share your thoughts!

Share your thought