Bhasaka
← Back to home

ಗುರುವಿನ ಗುಲಾಮನಾಗುವ ತನಕ

Author: ಪುರಂದರದಾಸCategory: ಶ್ರೀಗುರುRaaga: ಭೈರವ್Taala: ತ್ರಿತಾಳ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು? ವ್ಯರ್ಥವಾಯಿತು ಭಕುತಿ || ಆರು ಶಾಸ್ತ್ರವ ಓದಿದರೇನು? ಮೂರು ಪುರಾಣವ ಮುಗಿಸಿದರೇನು? ಸಾಧು ಸಜ್ಜನರ ಸಂಗವ ಮಾಡದೆ ಧೀರನೆಂದು ತಾ ತಿರುಗಿದರೇನು? || ಕೊರಳೊಳು ಮಾಲೆ ಧರಿಸಿದರೇನು? ಬೆರಳೊಳು ಜಪಮಣಿ ಎಣಿಸಿದರೇನು? ಮರಳಿ ಮರಳಿ ತಾ ಹೊರಳಿ ಬೂದಿಯೊಳು ಮರುಳನಂತಾಗಿ ತಿರುಗಿದರೇನು? || ನಾರಿಯ ಭೋಗ ಅಳಿಸಿದರೇನು? ಶರೀರಸುಖವನು ಬಿಡಿಸಿದರೇನು? ಮಾರಜನಕ ಶ್ರೀಪುರಂದರ ವಿಠ್ಠಲನ ಸೇರಿಕೊಂಡು ತಾ ಪಡೆಯುವ ತನಕ ||

Thoughts & Reflections

0

No reflections shared yet. Be the first to share your thoughts!

Share your thought