Bhasaka
← Back to home

ಹೇ ಆನಂದಮಯಿ

Category: ಶ್ರೀದೇವಿRaaga: ಭೈರವೀTaala: ಏಕತಾಲ
ಹೇ ಆನಂದಮಯಿ ನೀ ಎನ್ನ ನಿರಾನಂದ ಗೈಯದಿರು || ನಿನ್ನ ಪಾದವನುಳಿದು ಅನ್ಯದಾವುದನು ಎನ್ನಯ ಮನವು ಕಾಣದು ತಾಯಿ ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು ತಪ್ಪೆನ್ನದೇನೋ ಅರಿಯೆನು ನಾನು || ಭವಾನಿಯೆನ್ನುತ ಭವವ ದಾಟುವೆ ಎನ್ನುವ ಆಸೆಯು ಇದ್ದಿತು ಮನದಿ | ತುಂಬಿದ ಕಡಲೊಳು ಮುಳುಗಿಪೆ ಎಂಬುದ ಕಂಡವನಲ್ಲ ನಾ ಕನಸಿನಲೂ || ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ ತೇಲುತಲಿದ್ದರೂ ತಪ್ಪದೀ ದುಃಖವು | ಈ ಬಾರಿ ನಾನಿಲ್ಲಿ ಮುಳುಗಿದರಂತೂ ಜಪಿಸರು ಇನ್ನಾರೂ ನಿನ್ನಯ ನಾಮವ ||

Thoughts & Reflections

0

No reflections shared yet. Be the first to share your thoughts!

Share your thought