Bhasaka
← Back to home

ವೀರ ನರೇಂದ್ರ ವಿವೇಕಾನಂದ

Author: ಸ್ವಾಮಿ ನಿತ್ಯಸ್ಥಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಉದಯರಾಗTaala: ತ್ರಿತಾಲ
ವೀರ ನರೇಂದ್ರ ವಿವೇಕಾನಂದ ಇಳೆಗಿಳಿದು ತಾ ಬಂದ || ನಮ್ಮ || ಜ್ಞಾನಮಸ್ತಕ ತ್ಯಾಗವೇ ಉಸಿರು ದಿವ್ಯಜ್ಯೋತಿಯೇ ನಯನಾಂಬುಜವು ಪ್ರಣವರಚಿತ ವಾಗ್ಯಂತ್ರವಾತನದು || ದಯೆಯೇ ಹೃದಯ ನಿರ್ಭಯ ರುಧಿರ ಶ್ರದ್ಧಾ ಶಕ್ತಿ ನರನಾಡಿಗಳು | ಮುಕ್ತಿಯೇ ಆತನ ಮೂಲಮಂತ್ರವು || ವೀರ್ಯೋತ್ಸಾಹವೇ ಅಸ್ಥಿ ಸ್ನಾಯುಗಳು ಕ್ರಿಯೋತ್ತೇಜವೇ ಕೈಕಾಲುಗಳು ದಿವ್ಯಗುಣಾಕಾರ ಮೂರ್ತರೂಪ ||

Thoughts & Reflections

0

No reflections shared yet. Be the first to share your thoughts!

Share your thought