← Back to home
ಸ್ವಾಮಿ ವಿವೇಕರ ವಿಶ್ವ ಸಂದೇಶವು
Author: ಸ್ವಾಮಿ ನಿತ್ಯಸ್ಥಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಮಧುವಂತಿTaala: ಭಜನ್
ॐ
ಸ್ವಾಮಿ ವಿವೇಕರ ವಿಶ್ವಸಂದೇಶವು
ಸಂಘರೂಪದಲಿ ಮೂಡಿಹುದು |
ಸಂಘದ ಗುಡಿಯೊಳು ರಾಮಕೃಷ್ಣ ಗುರು
ಮೂರ್ತಿಯಂದದಲಿ ಶೋಭಿಪರು ||
ಭಾರತ ದೇಶದ ದಿವ್ಯ ಪರಂಪರೆ
ತಳಹದಿಯದರ ಆಗಿಹುದು |
ಮಾನವಸೇವೆಯೆ ಭಿತ್ತಿಕಂಬಗಳು
ಆತ್ಮಮುಕ್ತಿಯೆ ಗೋಪುರವು ||
ತ್ಯಾಗವೇ ಅದರ ಮಹಾದ್ವಾರವು
ಸಾಧನ ಜೀವನ ಪ್ರಾಂಗಣವು |
ಸಕಲ ಕ್ರಿಯೆಗಳೇ ಪೂಜಾ ಪರಿಕರ
ಆತ್ಮಸಮರ್ಪಣವಾರತಿಯು ||
Thoughts & Reflections
0No reflections shared yet. Be the first to share your thoughts!