← Back to home
ಸೃಷ್ಟಿಯೊಳಧಿಕನು ಮಾನವನು
Author: ಸ್ವಾಮಿ ನಿತ್ಯಸ್ಥಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಭೂಪ್Taala: ಭಜನ್
ॐ
ಸೃಷ್ಟಿಯೊಳಧಿಕನು ಮಾನವನು
ದೇವಾಸುರಗಂಧರ್ವರಿಗಿಂತಲೂ
ಮಾನವ ಜನ್ಮ ಮಿಗಿಲು ||
ದಿವ್ಯತೆ ಅವನೊಳಗಡಗಿಹುದು
ಅದುವೆ ಅವನ ನಿಜತಿರುಳು |
ಪಾಪಿಯು ಅವನೆಂಬುದೆ ಪಾಪವು
ಅಮೃತಾನಂದದ ಪಾಲವನು ||
ದಿವ್ಯತೆ ಹೊರಸೂಸುವುದೇ ಗುರಿಯು
ಮುಕುತಿಯ ಧಾಮದ ದ್ವಾರವದು |
ಜ್ಞಾನಕರ್ಮಗಳು ಭಕ್ತಿಯೋಗಗಳು
ಗುರಿಸಾಧನೆಗಿವು ದಿಟಮಾರ್ಗಗಳು ||
ಗ್ರಂಥ ಹೋಮ ಪೂಜಾದಿಗಳೆಲ್ಲವು
ತಿಳಿಯಿರಿ ಗೌಣದ ವಿಷಯಗಳು |
ಜೀವಸೇವೆಯೇ ಪರಶಿವ ಸೇವೆ
ಭವಸಾಗರವನೆ ದಾಟುವ ನಾವೆ ||
Thoughts & Reflections
0No reflections shared yet. Be the first to share your thoughts!