Bhasaka
← Back to home

ಹೇ ರಾಮ ಮತ್ತೆನಗೆ ದಿಕ್ಕಾರು

Author: ಸ್ವಾಮಿ ಹರ್ಷಾನಂದCategory: ಶ್ರೀರಾಮRaaga: ಮಾಲಕೌಂಸ್Taala: ಝಪತಾಲ
ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ || ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ ತಡಮಾಡದೆನ್ನನ್ನು ಕಾಯಬೇಕಯ್ಯಾ || ನಾನೆಷ್ಟು ಜಾರಿದರು ಈ ಧರಣಿಯೊಳಗೆ ನೀನಲ್ಲದಿನ್ನಾರು ಅವಲಂಬವೆನಗೆ || ನಿನ್ನನ್ನೆ ನಂಬಿದೆನು ಮನದಾಳದಲ್ಲಿ ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ|| ದಯೆಯ ಸಾಗರ ನೀನು ದಯನೀಯ ನಾನು ನ್ಯಾಯವೇ ನನ್ನನ್ನು ಕಾಪಾಡದಿಹುದು ||

Thoughts & Reflections

0

No reflections shared yet. Be the first to share your thoughts!

Share your thought