Bhasaka
← Back to home

ಈ ಜಗವ ನಂಬಿ ಸುಖವೇ ಇಲ್ಲ

Author: ಸ್ವಾಮಿ ಪುರುಷೋತ್ತಮಾನಂದCategory: ವೈರಾಗ್ಯRaaga: ಮಿಶ್ರ ಪಹಾಡೀTaala: ತ್ರಿತಾಲ
ಈ ಜಗವ ನಂಬಿ ಸುಖವೇ ಇಲ್ಲ | ಪಾರು ಮಾಡು ದೇವಾ || ಒಂದು ಸುಖಕೆ ನೂರು ದುಗುಡ ಇದುವೇ ಜಗದ ವೈಭವ || ಜನರ ದೂರಲೇಕೆ ನಾವು ಅವರೆ ಕಷ್ಟದಲ್ಲಿ ಇಹರು | ಅವರ ಚಿಂತೆ ಅವರಿಗೆ ಇಹುದು ನಮ್ಮ ಚಿಂತೆ ಯಾರಿಗೆ ಮುದ್ದು? || ಮನುಜ ತನ್ನ ಮಿತಿಯನು ಅರಿಯ ಕಟ್ಟುತಿಹನು ಗಗನದಿ ಮನೆಯ | ಸುಖದಿ ಬಾಳ್ವೆನೆಂದು ದುಡಿದ ಬಾಳು ಮುಗಿವ ಮೊದಲೇ ಮಡಿದ || ಎಷ್ಟು ಸಾವು ಏನು ನೋವು ಇದಕೆ ಆದಿ ಅಂತ್ಯವೆ ಇಲ್ಲ | ಆಸೆ ಪಟ್ಟು ಪಡೆದುದನೆಲ್ಲ ಇಲ್ಲೇ ಬಿಟ್ಟು ನಡೆಯುವರೆಲ್ಲ || ಹೇ ದೇವ ನೀನೊಬ್ಬನೇ ಆತ್ಮೀಯ ಬಂದು ಎನಗೆ | ಪ್ರೀತಿ ನೀಡುವವರಲ್ಲಿ ನಿನ್ನನ್ನು ಬಿಟ್ಟರಿಲ್ಲ ||

Thoughts & Reflections

0

No reflections shared yet. Be the first to share your thoughts!

Share your thought