Bhasaka
← Back to home

ದೃಷ್ಟಿ ನಿನ್ನ ಪಾದದಲ್ಲಿ ಇಡೋ ಹಾಂಗೆ

Author: ಪುರಂದರದಾಸCategory: ಶ್ರೀಕೃಷ್ಣ
ದೃಷ್ಟಿ ನಿನ್ನ ಪಾದದಲ್ಲಿ ಇಡೋ ಹಾಂಗೆ ದುಷ್ಟ ಜನರ ಸಂಗಗಳ ಬಿಡೋ ಹಾಂಗೆ ಕೆಟ್ಟ ಮಾತುಗಳಿಗೆ ಕಿವಿ ಕೊಡದ್ಹಾಂಗೆ - ಮನ ಕಟ್ಟಿಸಯ್ಯ ನಿನ್ನ ಪಾದ ಬಿಡದ್ಹಾಂಗೆ || ದಿಟ್ಟನಾಗಿ ಕೈಯನೆತ್ತಿ ಕೊಡೋಹಾಂಗೆ - ಶ್ರೀ ಕೃಷ್ಣ ನಿನ್ನ ಪೂಜೆಗಳ ಮಾಡೋಹಾಂಗೆ ಭ್ರಷ್ಟನಾಗಿ ನಾಲ್ವರೊಳಗೆ ತಿರುಗದ್ಹಾಂಗೆ ಶಿಷ್ಟಜನರ ಸೇವೆಯನು ಮಾಡೋಹಾಂಗೆ || ಪುಟ್ಟಿಸಿದ ತಾಯಿತಂದೆಯಲ್ಲೋ ನೀನು ಹೊಟ್ಟೆಗಾಗಿ ದೈನ್ಯಪಡಲಾರೆ ನಾನು ಪಟ್ಟೆಪಟ್ಟುವಾಳಿ ಬೇಡಲಿಲ್ಲ ನಾನು ಗುಟ್ಟು ಅಭಿಮಾನಗಳ ಕಾಯೋ ನೀನು || ನಟ್ಟ ನೀರೊಳಗೆ ಈಸಲಾರೆ ನಾನು ಕಟ್ಟೆಯ ಸೇರಿಸಬೇಕಯ್ಯ ನೀನು ಕಟ್ಟೆಯ ಕಾಣದೆ ಅಲ್ಲಾಡುವೆ ನಾನು - ಕೈಯ ಬಿಡುವರೆ ಪುರಂದರವಿಠಲ ನೀನು ||

Thoughts & Reflections

0

No reflections shared yet. Be the first to share your thoughts!

Share your thought