Bhasaka
← Back to home

ಮಾಯೆಯಾ ಸೂತ್ರದಲಿ ಬಿಗಿದ ಪಟವೇರುತಿದೆ

Author: ವಚನವೇದCategory: ಶ್ರೀದೇವಿRaaga: ರಾಗಮಾಲಿಕೆTaala: ತೇವರಾ
ಖಮಾಜ್- ಪಟವನಾಡಿಸುತಿಹಳು ಈ ನನ್ನ ಘನಶ್ಯಾಮೆ ಜಗದ ಸಂಸಾರಗಳ ಪೇಟೆಯಲ್ಲಿ | ಮಾಯೆಯಾ ಸೂತ್ರದಲಿ ಬಿಗಿದ ಪಟವೇರುತಿದೆ ತುಂಬಿರುವ ಭರವಸೆಯ ಗಾಳಿಯಲ್ಲಿ || ಮಧ್ಯಮಾವತಿ- ನರರಸ್ಥಿಪಂಜರದಿ ಮೂರು ಗುಣಗಳ ಬೆಸೆದು ಮಾಡಿರುವಳೀ ತಾಯಿ ಕುಶಲಕಲೆಯ | ಪಟದ ಸೂತ್ರದ ಮೇಲೆ ವಿಷಯದಂಟನು ಬಳಿದು ಹರಿಯದಂತವುಗಳನು ರಚಿಸಿರುವಳು|| ಯಮನ್- ಇಂತು ಹಾರುವ ನೂರುಸಾವಿರದ ಪಟಗಳಲಿ ಒಂದೊ ಎರಡೊ ಹರಿದು ಬಿಡುಗಡೆಯ ಪಡೆದು | ಹೋಗುತಿರಲವುಗಳನು ನಿರುಕಿಸುತ ಈ ತಾಯಿ ಕೈಯ ಚಪ್ಪಳೆ ತಟ್ಟಿ ನಲಿಯುತಿಹಳು || ದುರ್ಗಾ- ರಾಮಪ್ರಸಾದನಿದೋ ನುಡಿಯುವನು: "ಓ ತಾಯಿ ಅನುಕೂಲ ಮಾರುತವು ಬೀಸುವಾಗ | ನೀನಿನಿತು ಕೃಪೆಗೈದು ಕೈ ಸಡಿಲಗೊಳಿಸಿದರೆ ಎನಿತೊ ಪಟ ದಾಟುವುವು ಭವಜಲಧಿಯ!"

Thoughts & Reflections

0

No reflections shared yet. Be the first to share your thoughts!

Share your thought