Bhasaka
← Back to home

ಜೈ ಕಾಳಿ ಎನ್ನುತ್ತ ಹೃದಯ ರತ್ನಾಕರನ

Author: ವಚನವೇದCategory: ಶ್ರೀಮಹಾಕಾಳಿRaaga: ದರಬಾರೀ ಕಾನಡಾTaala: ಝಪತಾಳ
ಜೈ ಕಾಳಿ ಎನ್ನುತ್ತ ಹೃದಯ ರತ್ನಾಕರನ ಅಗಾಧ ಆಳಕ್ಕೆ ಮುಳುಗು ಮನವೇ || ಮೊದಲೆರಡು ಸಲ ನೀನು ವಿಫಲನಾದರೆ ಒಳಗೆ ಬರಿ ಶೂನ್ಯವೆಂದಿದನು ತೆಗಳಬೇಡ | ದೃಢಮನದ ಸಂಯಮದಿ ಕುಲಕುಂಡಲಿನಿ ಕೂಲದೊಳಗಿಳಿದು ಅನುಭವವ ಪಡೆದು ನೋಡ || ಜ್ಞಾನಸಾಗರದೊಳಗೆ ಶಾಂತಿಮುಕ್ತಾಫಲದ ಭಂಡಾರವಿದೆ ಹೋಗು ಅದನು ಗಳಿಸು | ಆಹಾರಲೋಭದಲಿ ಅಲೆವ ಅರಿವರ್ಗಗಳ ವಿವೇಕಲೇಪನದಿ ದೂರಗೊಳಿಸು॥ ರಾಮಪ್ರಸಾದನನು ಕೇಳು ಹೇಳುವನವನು ಅಂತರಂಗದೊಳಿರುವ ಅನಂತ ರತ್ನವನು ಮುಳುಗಿ ಮೇಲಕೆ ತಂದು ನೀನು ಧರಿಸು ||

Thoughts & Reflections

0

No reflections shared yet. Be the first to share your thoughts!

Share your thought