Bhasaka
← Back to home

ತಾಯ ಮಾಯದ ಬಲೆಯು

Author: ವಚನವೇದCategory: ಶ್ರೀದೇವಿRaaga: ಭೀಮಪಲಾಸೀTaala: ತೇವರಾ
ತಾಯ ಮಾಯದ ಬಲೆಯು ಹರಹಿದೆ ಮೂರು ಲೋಕದ ಅಗಲಕೆ || ಬ್ರಹ್ಮವಿಷ್ಣುಗಳೆಲ್ಲ ಮೂರ್ಛಿತ- ರಾಗಿ ಸಂದರು ಮಾಯೆಗೆ | ಇನ್ನು ಮನುಜರ ಪಾಡು ಏನಿದೆ ನಮಗೆ ಎಲ್ಲಿದೆ ಬಿಡುಗಡೆ || ಬಲೆಗೆ ಸಿಲುಕಿದ ಮೀನಿನಂದದಿ ಮನುಜಕುಲವಿಲ್ಲಲೆದಿದೆ | ತನ್ನ ನೂಲೊಳು ತಾನೆ ಸಿಲುಕಿದೆ ತೆರಣಿ ಹುಳುವಿನ ತೆರನಿದೆ ||

Thoughts & Reflections

0

No reflections shared yet. Be the first to share your thoughts!

Share your thought