Bhasaka
← Back to home

ಶ್ರೀಘನಶ್ಯಾಮೆಯ ಚರಣಾಕಾಶದಿ

Author: ವಚನವೇದCategory: ಶ್ರೀದೇವಿRaaga: ಜೋಗಿಯಾTaala: ತ್ರಿತಾಳ
ಶ್ರೀಘನಶ್ಯಾಮೆಯ ಚರಣಾಕಾಶದಿ ಗಾಳಿಪಟದಿ ತೆರದಿ ಹಾರುತಿರಲು ಮನ ದುರಿತ ಕಲುಷಗಳ ಬಿರುಗಾಳಿಯು ಭರದಿ || ಅಮ್ಮಾ ಬೀಸಿ ಪಟವ ಈ ತಿರೆಗೆ ತಳ್ಳಿತೋ ಮತ್ತೆ ಏರದಂತೆ ಸತಿ ಸುತ ವ್ಯಾಮೋಹದ ಮಾಯೆಗೆ ಸಿಕ್ಕಿ ಹರಿಯುವಂತೆ || ಅಮ್ಮಾ ಮನದ ಪಟದ ಜ್ಞಾನಮುಂಡವೇ ಮುರಿಯಲಿಳೆಗೆ ಬಿತ್ತು ಶ್ರದ್ಧೆಯ ಸೂತ್ರವ ಹಿಡಿದಿದ್ದರೂ ಪಟ ಅರಿವರ್ಗದಿ ನಮೆದಾಯ್ತು || ಅಮ್ಮಾ ಇಂಥ ಪಟವ ನಾ ಹಾರಾಟಕೆ ಬಿಡದಿದ್ದರೆ ಒಳಿತಾಗಿತ್ತು ಎಂದು ನುಡಿವನೀ ನರೇಶಚಂದ್ರನು ನೋವಿನಲ್ಲಿ ನಮೆದು || ಅಮ್ಮಾ

Thoughts & Reflections

0

No reflections shared yet. Be the first to share your thoughts!

Share your thought