Bhasaka
← Back to home

ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ

Author: ವಚನವೇದCategory: ಶ್ರೀಕೃಷ್ಣRaaga: ರಾಗಮಾಲಿಕೆTaala: ಝಪತಾಲ
ಬೃಂದಾವನ ಸಾರಂಗ - ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ ಕಮಲಾಪತೀ ಓಹೋ, ಭಕ್ತಿಪ್ರಿಯನೆ ನನ್ನ ಭಕ್ತಿಯು ನಿನಗೆ ರಾಧಾಸಖೀ || ನನ್ನ ದೇಹವೆ ನಿನ್ನ ನಂದಗೋಕುಲವಯ್ಯ ನನ್ನ ದೇಹವೆ ನಿನಗೆ ಶ್ರೀ ಯಶೋದೆ | ನನ್ನ ಮುಕ್ತಿಯ ಬಯಕೆ ಗೋಪನಾರಿಯರಯ್ಯ ಬಾ ಇಲ್ಲಿ ನೆಲಸಯ್ಯ, ಇದು ನಿನ್ನದೇ || ಖಮಾಜ್‌ - ಇದನೆತ್ತಿ ಬಿಸುಡಯ್ಯ, ನೋಡು ಬಿದ್ದಿದೆ ಇಲ್ಲಿ ನನ್ನ ಪಾಪದ ಭಾರ ಗೋವರ್ಧನ | ಕಂಸಚರರಾಗಿರುವ ಅರಿವರ್ಗಗಳ ಕೊಂದು ನನ್ನೊಳಗೆ ನೆಲಸಯ್ಯ ಜನಾರ್ದನ || ಭೂಪಾಲಿ - ನನ್ನ ಮನಸಿನ ಬಯಲ ಹುಲ್ಲುಗಾವಲ ಚರಿಸು ನಿನ್ನ ಕರುಣೆಯ ಕೊಳಲ ಸವಿರಾಗದೊಳಗೆನ್ನ ಮನದ ಧೇನುವ ನಿನ್ನ ವಶವಪಡಿಸು | ನನ್ನ ಹೃದಯದ ಕರೆಯ ಯಮುನಾನದೀ ತಟದಿ ನನ್ನ ಬಯಕೆಯ ವೃಕ್ಷದಡಿಗೆ ನೆಲಸು || ಧಾನೀ - ಅಲ್ಲಿ ಬೃಂದಾವನದಿ ರಾಖಲನ ಪ್ರೇಮವೇ ನಿನ್ನನೀ ತೆರದಲ್ಲಿ ಬಂಧಿಸಿರಲು | ಆ ಅಲ್ಲಿ ನನ್ನನೂ ಗೊಲ್ಲನಾಗಿಸು ದೇವ ಎಂದು ಈ ದಾಶರಥಿ ಬೇಡುತಿಹನು ||

Thoughts & Reflections

0

No reflections shared yet. Be the first to share your thoughts!

Share your thought