Bhasaka
← Back to home

ಜಯ ಜಗದಂಬ ಮಾ ಜನನಿ ಶ್ಯಾಮಾ

Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀದೇವಿRaaga: ರಾಮಪ್ರಸಾದೀTaala: ಏಕತಾಲ
ಜಯ ಜಗದಂಬ ಮಾ ಜನನಿ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥ ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗ್ರಹೇ ಹೃದಯದಿ | ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ | ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥ ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೆ ನೀನು ಭವತಾರಿಣೀ | ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ | ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ॥

Thoughts & Reflections

0

No reflections shared yet. Be the first to share your thoughts!

Share your thought