← Back to home
ಭವಾನಿ ಭಕ್ತಸುಖದಾಯಿನೀ
Author: ಸ್ವಾಮಿ ಪುರುಷೋತ್ತಮಾನಂದCategory: ಶ್ರೀದೇವಿRaaga: ಮಿಶ್ರ ಪೀಲೂTaala: ಕವಾಲೀ
ॐ
ಭವಾನಿ ಭಕ್ತಸುಖದಾಯಿನೀ ||
ಭಕ್ತಿಗಮ್ಯಾ ಭಕ್ತಿವಶ್ಯಾ
ಭಾವಕಪ್ರಚೋದಿನೀ
ಭವಾನಿ ಭಕ್ತಸುಖದಾಯಿನೀ ||
ಮಹಾಮಾಯಾ ಮಹಾನಿಲಯಾ
ಮಾನವಕುಲಜನನೀ
ಮಾಲಿನೀ ಮದನಬಲನಾಶಿನೀ ||
ಪ್ರಭಾರೂಪಾ ಪ್ರೇಮರೂಪಾ
ಪಾತಕನಿವಾರಣೀ
ಪಾವನೀ ಪರಮಪದದಾಯಿನೀ॥
Thoughts & Reflections
0No reflections shared yet. Be the first to share your thoughts!