Bhasaka
← Back to home

ಅಂತರಾಳವನಳೆವ ಕಂಗಳ

Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ಭೂಪಾಲೀTaala: ದೀಪಚಂದಿ
ಅಂತರಾಳವನಳೆವ ಕಂಗಳ ಎದೆಯ ಕತ್ತಲ ಕಳೆವ ತಿಂಗಳ ಮುಖದಿ ಶೋಭಿಪ ಹಾಸವು | ದಿವ್ಯ ವದನದಿ ಪ್ರಭೆಯ ಹೊಮ್ಮಿಸಿ ಭವ್ಯ ಸದನಕೆ ಪಥವ ನಿರ್ಮಿಸಿ ಅರಳಿತಿಹುದು ನಿತ್ಯವೂ || ವರುಷ ವರುಷದ ತೀವ್ರ ಸಾಧನೆ- ಯಿಂದ ಚಿಮ್ಮಿದ ಮಿಂಚಿದು । 'ತಾಯಿ ತಾಯೀ' ಎಂದು ಅಳಲುತ ಕೊನೆಗೆ ಪಡೆದಿಹ ಫಲವಿದು || ಮಾತೆ ಸೀತೆಯ ಮುಖದ ನಗೆನಿಧಿ ಬಂದು ನೆಲೆಸಿಹುದಿಲ್ಲಿಗೆ | ನೂರು ಸಾಸಿರ ದಳವನರಳಿಸಿ ಕಂಪ ಬೀರುವ ಮಲ್ಲಿಗೆ ||

Thoughts & Reflections

0

No reflections shared yet. Be the first to share your thoughts!

Share your thought