← Back to home
ರಾಮಕೃಷ್ಣದಿಗಂತದಲಿ
Author: ಹೆಚ್ ಎನ್ ಮುರಳೀಧರCategory: ಶ್ರೀಸ್ವಾಮಿ ವಿವೇಕಾನಂದRaaga: ಭೂಪಾಲೀTaala: ದಾದರಾ
ॐ
ರಾಮಕೃಷ್ಣದಿಗಂತದಲಿ
ಅರುಣಕಿರಣ ಹೊಮ್ಮಲು
ಮೂಡಿಬಂದ ತ್ಯಾಗರವಿಯೆ
ಬೆಳಕ ಹರಡಿ ಸುತ್ತಲು |
ಗುರುವಿನಡಿಯೆ ಮಲ್ಲಸಾಲೆ-
ಶಿಲೆಯು ಶಿಲ್ಪವಾಯಿತು;
ನೂರು ಪ್ರಶ್ನೆ ಕರಗಿ ಉರಿದು
ಜ್ಯೋತಿ ಜಗವ ತುಂಬಿತು |
ಉತ್ಸವರಥವೇರಿ ಜಗವ
ಸುತ್ತಿಬಂದ ಸ್ಫೂರ್ತಿಯೇ;
ಶ್ರೀಗುರುವಿನ ಧವಳಕೀರ್ತಿ-
ಧ್ವಜವ ಮೆರೆದ ಮೂರ್ತಿಯೆ |
ಎನ್ನೆದೆಯೊಳು ಉದಯಿಸಿಂದು,
ಕಾಳರಾತ್ರಿ ಕಳೆಯಲಿ;
ಕಿರಣಜಲದಿ ಜೀವ ನೆನೆದು
ಪುಳಕಾಂಕುರ ಬೆಳೆಯಲಿ |
Thoughts & Reflections
0No reflections shared yet. Be the first to share your thoughts!