Bhasaka
← Back to home

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು

Author: ವಚನವೇದCategory: ಶ್ರೀದೇವಿRaaga: ಝಿಂಝೋಠಿTaala: ಝಪತಾಲ
ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು ನೀನೆ ಭವಸಾಗರವ ದಾಟಿಸುವ ಹಡಗು | ನಿನ್ನ ಇಚ್ಛೆಯ ನೀನು ಪೂರೈಸುತಿರಲು ತಮ್ಮಗೈಮೆಯಿದೆಂದು ತಿಳಿವರೀ ಜನರು || ಕೆಸರಿನಲಿ ಸಲಗವನು ಹಿಡಿಯುವಳು ನೀನು ಹೆಳವನನು ಗಿರಿಯ ತುದಿಗೊಯ್ಯುವಳು ನೀನು | ಹಲವರಿಗೆ ಬ್ರಹ್ಮಪದವಿತ್ತು ಹಲವರನು ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು || ನೀನು ಚಾಲಕಶಕ್ತಿ ನಾನೊಂದು ಯಂತ್ರ ನಾನೊಂದು ಬರಿಯ ಮನೆ ನೀನದರ ಮಂತ್ರ | ನಾನೊಂದು ರಥವಾಗೆ ನೀನದರ ರಥಿಕ ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ ||

Thoughts & Reflections

0

No reflections shared yet. Be the first to share your thoughts!

Share your thought