Bhasaka
← Back to home

ಎಂತಾದರೂ ಚಿಂತೆ ಬಿಡದು

Author: ಪುರಂದರದಾಸCategory: ಶ್ರೀಕೃಷ್ಣRaaga: ಯಮನ್Taala: ಝಪತಾಲ
ಎಂತಾದರೂ ಚಿಂತೆ ಬಿಡದು | ನಿಶ್ಚಿಂತರಾದವರ ನಾನೊಬ್ಬರನು ಕಾಣೆ || ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ | ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ || ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ | ತಮ್ಮಅರ್ಜುನಗೆ ವೈರಿಯ ಕೊಲ್ಲುವ ಚಿಂತೆ ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ || ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ | ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ ಶಕ್ತ ಪುರಂದರವಿಟ್ಠಲಗೆಮ್ಮ ಸಲಹುವ ಚಿಂತೆ ||

Thoughts & Reflections

0

No reflections shared yet. Be the first to share your thoughts!

Share your thought