Bhasaka
← Back to home

ಎಲ್ಲಿ ಅರಸುವೆ ನೀನು

Author: ವಚನವೇದCategory: ಇತರೆRaaga: ಮಾಲಕೌಂಸ್Taala: ಝಪತಾಲ
ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ವಾಸಿಸಿರುವೆ | ನಾನು ನಿನ್ನೊಂದಿಗೇ ಇದ್ದರೂ ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ || ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ | ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ || ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ ಯೋಗಾದಿ ಸಿದ್ಧಿಗೂ ದೂರ ನಾನು | ಶ್ರದ್ದೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡುಕಿದರೆ ದೊರೆವೆ ನಾನು ||

Thoughts & Reflections

0

No reflections shared yet. Be the first to share your thoughts!

Share your thought