Bhasaka
← Back to home

ಏನು ಧನ್ಯಳೊ ಲಕುಮಿ

Author: ಪುರಂದರದಾಸCategory: ಶ್ರೀಮಹಾಲಕ್ಷ್ಮಿRaaga: ಗೌಡಸಾರಂಗTaala: ದಾದರಾ
ಏನು ಧನ್ಯಳೊ | ಲಕುಮಿ | ಎಂಥಾ ಮಾನ್ಯಳೋ || ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು || ಕೋಟಿಕೋಟಿ ಭತ್ಯರಿರಲು ಹಾಟಕಾಂಬರನ ಸೇವೆ | ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು || ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು ಚಿತ್ರಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು || ಸರ್ವತ್ರದಿ ವ್ಯಾಪ್ತನಾದ ಸರ್ವದೋಷರಹಿತನಾದ ಶರ್ವವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳು ||

Thoughts & Reflections

0

No reflections shared yet. Be the first to share your thoughts!

Share your thought