Bhasaka
← Back to home

ಏನು ನಿರುಪಮ ಸೊಬಗು

Author: ವಚನವೇದCategory: ಪರಬ್ರಹ್ಮRaaga: ಭೂಪಾಲೀTaala: ತೇವರಾ
ಏನು ನಿರುಪಮ ಸೊಬಗು, ಓಹೋ ಎಂಥ ಚೆಲುವಿನ ಮೋಹನ | ನನ್ನ ಹೃದಯದ ಮೂರ್ತಿ ಬಂದನು ಎದೆಯ ಗುಡಿಸಲಿಗೀದಿನ | ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ ಹತ್ತು ಕಡೆಗೂ ಸುಮ್ಮನೆ | ಯಾವ ಸಂಪದವನ್ನು ಸುರಿಯಲಿ ಹೇಳು ನಿನ್ನೀ ಪದದೆಡೆ ? ನನ್ನ ಹರಣವೆ ಶರಣು ನಿನಗೆ, ನನ್ನ ಆತ್ಮವೆ ನಿನ್ನದು; ಮತ್ತೆ ಏನನು ನೀಡಲಯ್ಯಾ ? ನನ್ನದೆಲ್ಲವು ನಿನ್ನದು |

Thoughts & Reflections

0

No reflections shared yet. Be the first to share your thoughts!

Share your thought