Bhasaka
← Back to home

ಕಮಲವದನ ಕಲುಷಹರಣ

Author: ಸ್ವಾಮಿ ತದ್ರೂಪಾನಂದCategory: ಶ್ರೀರಾಮಕೃಷ್ಣRaaga: ಯಮನ್ ಕಲ್ಯಾಣ್Taala: ಏಕತಾಲ
ಕಮಲವದನ ಕಲುಷಹರಣ ನಿನಗೆ ನಮನ ರಾಮಕೃಷ್ಣ|| ಧರಮಸ್ಥಾಪನ ನಿನ್ನಾಗಮನ ಪರಮಪಾವನ ನಿನ್ನ ಭಜನ | ಕೊಡುವೆ ನಿನಗೆ ಹೃದಯದಾಸನ ಕಳೆಯೋ ಎನ್ನ ಜನುಮಮರಣ || ಜಗದ ಜೀವನ ಪುಣ್ಯಕಥನ ವಿಜಿತಮದನ ಕರಮ ದಹನ | ರಚಿಸಿ ನೀನು ವಿಶ್ವಕವನ ನೀಡುತಿರುವೆ ತವ ದರುಶನ || ವಿಶ್ವಮೋಚನ ತವಗುಣಗಾನ ಚಿತ್ತಶೋಧನ ನಿನ್ನನುಧ್ಯಾನ | ನನ್ನದೆನುವ ತನುಮನಧನ. ನಿನಗೆ ಅರ್ಪಣ ಹೇ ಮಮ ಜೀವನ ||

Thoughts & Reflections

0

No reflections shared yet. Be the first to share your thoughts!

Share your thought