Bhasaka
← Back to home

ಕರುಣಾಕರ ನೀನೆಂಬುವುದೇತಕೋ

Author: ಪುರಂದರದಾಸCategory: ಶ್ರೀಕೃಷ್ಣRaaga: ತೋಡಿTaala: ತ್ರಿತಾಲ
ಕರುಣಾಕರ ನೀನೆಂಬುವುದೇತಕೋ ಭರವಸೆಯಿಲ್ಲೆನಗೆ || ಪರಿಪರಿಯಲಿ ಈ ನರಜನ್ಮವನಿತ್ತು ತಿರುಗಿ ತಿರುಗಿ ಮನಕರಗಿಸುವುದ ಕಂಡು || ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ | ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿವೆ ಕೃಷ್ಣಾ|| ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೋ | ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಬಾಧಿಪುದುಂಟೆ || ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ | ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought