Bhasaka
← Back to home

ಅಮ್ಮ ನಿಮ್ಮ ಮನೆಗಳಲ್ಲಿ

Author: ಪುರಂದರದಾಸCategory: ಶ್ರೀಕೃಷ್ಣRaaga: ದೇಸ್Taala: ಕವಾಲೀ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಾಣಿರೇನೆ || ಕಾಶಿ ಪೀತಾಂಬರ ಕೈಯಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ || ಕರದಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಧರಿಸಿದ ಹುಲಿಯುಗುರಮ್ಮ| ಅರಳೆಲೆ ಕನಕಕುಂಡಲ ಕಾಲಲಂದುಗೆ ಉರಗಶಯನ ಬಂದ ಕಾಣಿರೇನೆ || ಕಾಲಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣನು ನಾಟ್ಯವಾಡುತಲಿ | ಮೇಲಾಗಿ ಬಾಯಲ್ಲಿ ಜಗವನು ತೋರಿದ ಮೂಲೋಕದೊಡೆಯನ ಕಾಣಿರೇನೆ || ಕುಂಕುಮ ಕಸ್ತೂರಿ ಕುಡಿಕುಡಿ ನಾಮವು ಶಂಖಚಕ್ರಗಳ ಧರಿಸಿಹನಮ್ಮ ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷ ಬಂದ ಕಾಣಿರೇನೆ || ನೊಸಲ ಸುತ್ತಿದ ಪಟ್ಟ ನಡುವಿನ ವಡ್ಯಾಣ ಎಸೆವ ಕಸ್ತೂರಿ ಬಟ್ಟು ಮೈಯವನಮ್ಮ| ಪಸರಿಸಿ ಪಟ್ಟೆಯ ಹಾವಿಗೆ ಮೆಟ್ಟಿದ ಅಸುರಾಂತಕ ಬಂದ ಕಾಣಿರೇನೆ || ತೆತ್ತೀಸಕೋಟಿ ದೇವತೆಗಳನೊಡಗೂಡಿ ಹತ್ತವತಾರವನೆತ್ತಿದನೆ | ಭಕ್ತವತ್ಸಲ ನಮ್ಮ ಪುರಂದರವಿಟ್ಠಲ ನಿತ್ಯೋತ್ಸವ ಬಂದ ಕಾಣಿರೇನೆ ||

Thoughts & Reflections

0

No reflections shared yet. Be the first to share your thoughts!

Share your thought