Bhasaka
← Back to home

ಕರುಣಿಸೋ ರಂಗಾ

Author: ಪುರಂದರದಾಸCategory: ಶ್ರೀಕೃಷ್ಣRaaga: ಜೋಗಿಯಾTaala: ತ್ರಿತಾಲ
ಕರುಣಿಸೋ ರಂಗಾ ಕರುಣಿಸೋ | ಹಗಲೂ ಇರುಳೂ ನಿನ್ನ ಸ್ಮರಣೆ ಮರೆಯದಂತೆ || ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲರಿಯೆ | ಬಕವೈರಿಯಂತೆ ಧ್ಯಾನ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೋ || ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲರಿಯೆನೋ ಕರಿರಾಜನಂತೆ | ವರಕಪಿಯಂತೆ ದಾಸ್ಯ ಮಾಡಲರಿಯೆ ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ || ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ- ಛಲವನರಿಯೆನೋ ಪ್ರಹ್ಲಾದನಂತೆ | ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought