Bhasaka
← Back to home

ಕಲಿಯುಗದಲಿ ಹರಿನಾಮವ

Author: ಪುರಂದರದಾಸCategory: ಶ್ರೀಕೃಷ್ಣRaaga: ಝಿಂಝೋಠಿTaala: ತ್ರಿತಾಲ
ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ದರಿಸುವವೋ ರಂಗಾ || ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ || ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ | ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಚನು ನಾನೆಂದೆನಬೇಡ | ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ || ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ | ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ ||

Thoughts & Reflections

0

No reflections shared yet. Be the first to share your thoughts!

Share your thought