Bhasaka
← Back to home

ಕಳೆಯಬೇಕೆ ದಿನಗಳೆಲ್ಲ

Category: ವೈರಾಗ್ಯRaaga: ಭೀಮಪಲಾಸೀTaala: ಏಕತಾಲ
ಕಳೆಯಬೇಕೆ ದಿನಗಳೆಲ್ಲ ವಿಫಲವಾಗಿ ಹೋಗಿಯೇ | ಹಗಲು ಇರುಳು ಆಶಾಪಥವ ಕಾಯುತಿಹೆನು ಸ್ವಾಮಿಯೇ || ತ್ರಿಭುವನಗಳ ನಾಥ ನೀನು ಭಿಕಾರಿ ಅನಾಥ ನಾನು | ಕರೆಯಲೆಂತು ಮಮ ಹೃದಯದಿ ನೆಲೆಸು ಎಂದು ಹೀಗೆಯೇ || ಹೃದಯ ಕುಟಿಯ ದ್ವಾರಗಳನು ಅನವರತವು ತೆರೆದಿರುವೆನು | ಕೃಪೆಯ ತೋರಿ ಬಂದು ನೀಡು ಶಾಂತಿಯನ್ನು ಸ್ವಾಮಿಯೇ ||

Thoughts & Reflections

0

No reflections shared yet. Be the first to share your thoughts!

Share your thought