Bhasaka
← Back to home

ಕಂಗಳಿವ್ಯಾತಕೋ

Author: ಶ್ರೀಪಾದರಾಜಸ್ವಾಮಿCategory: ಶ್ರೀಕೃಷ್ಣRaaga: ಭೈರವೀTaala: ಏಕತಾಲ
ಕಂಗಳಿವ್ಯಾತಕೋ ಕಾವೇರಿರಂಗನ ನೋಡದ || ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ || ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು | ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ಕಾಣದ || ಹರಿಪಾದೋದಕಸಮ ಕಾವೇರಿ ವಿರಜಾ ನದಿಲಿ ಸ್ನಾನವ ಮಾಡಿ | ಪರಮ ವೈಕುಂಠ ರಂಗ ಮಂದಿರ ಪರವಾಸುದೇವನ ನೋಡದ || ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ | ತೇರನೇರಿ ಬೀದಿಲಿ ಬರುವ ರಂಗವಿಟ್ಠಲರಾಯನ ನೋಡದ ||

Thoughts & Reflections

0

No reflections shared yet. Be the first to share your thoughts!

Share your thought