Bhasaka
← Back to home

ಕಂಡು ಕಂಡು ನೀ ಎನ್ನ

Author: ಪುರಂದರದಾಸCategory: ಶ್ರೀಕೃಷ್ಣRaaga: ರಾಗಮಾಲಿಕೆTaala: ಝಪತಾಳ
ಶಹನ* - ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ | ಬಂಧು ಬಳಗವು ನೀ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ || ಮೋಹನ* - ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು | ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ || ಭೈರವೀ* - ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ | ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ ||

Thoughts & Reflections

0

No reflections shared yet. Be the first to share your thoughts!

Share your thought