Bhasaka
← Back to home

ಕಂದಾ ಬೇಡವೋ

Author: ಪುರಂದರದಾಸCategory: ಶ್ರೀಕೃಷ್ಣRaaga: ಮಿಶ್ರ ಬೇಹಾಗ್Taala: ತೇವರಾ
ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೋ || ಕಂದಾ ಬೇಡವೋ ಮಣ್ಣು ತಿನ್ನಲಿಬೇಡ | ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ || ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು | ಜೋಗಿ ಬರುತಾನಲ್ಲಿ ಅಂಜಿಸುವುದಕೀಗ || ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ | ಬಾಯಲಿ ಇಟ್ಟನು ಬಾಲಕೃಷ್ಣಯ್ಯನು || ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ | ಮುಟ್ಟಬೇಡೋ ಮಣ್ಣು ಬೆಣ್ಣೆ ತರುವೆನಯ್ಯ || ಅಮ್ಮಯ್ಯ ಕೇಳಲೆ ಬಾಯಲಿ ಮಣ್ಣಿಲ್ಲ | ಗುಮ್ಮನು ಬರಬೇಡ ಸುಮ್ಮನೆ ಇರುತೇನೆ || ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು | ಮಗುವಿನ ಬಾಯ ಶೋಧಿಸಿದಳು ಬೇಗನೆ || ಬಾಯಲಿ ಕಂಡಳು ಹದಿನಾಲ್ಕು ಲೋಕವ | ಕಾಯ ಮರೆತಳಯ್ಯ ಮರುಳಿಗೆ ವಶಳಾಗಿ || ಕಂದನು ನೀನಲ್ಲ ಕಂದರ್ಪಜನಕನೆ | ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ || ಜಯವಾಗಲಿ ನಮ್ಮ ಕೃಷ್ಣರಾಯಗೆ ಬಹು | ಜಯವಾಗಲಿ ಅವನ ಭಕ್ತರ ವೃಂದಕೆ || ಲೀಲಾವಿನೋದ ಯಶೋದಾಬಾಲನು | ಲೀಲೆ ತೋರಿದನಂದು ಪುರಂದರವಿಟ್ಠಲ ||

Thoughts & Reflections

0

No reflections shared yet. Be the first to share your thoughts!

Share your thought