Bhasaka
← Back to home

ಕೃಷ್ಣನ ನೆನೆದರೆ

Author: ಪುರಂದರದಾಸCategory: ಶ್ರೀಕೃಷ್ಣRaaga: ದರಬಾರೀ ಕಾನಡಾTaala: ತೇವರಾ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ| ಕೃಷ್ಣ ಎನಬಾರದೆ || ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ || ಮಲಗೆದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ || ಸುಳಿದಾಡುತ ಮನೆಯೊಳಗಾದರು ಒಮ್ಮೆ| ಕೃಷ್ಣ ಎನಬಾರದೆ || ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ| ಕೃಷ್ಣ ಎನಬಾರದೆ || ದಾರಿಯ ನಡೆವಾಗ ಭಾರವ ಹೊರುವಾಗ | ಕೃಷ್ಣ ಎನಬಾರದೆ || ನೀಗದಾಲೋಚನೆ ರೋಗೋಪದ್ರದಲೊಮ್ಮೆ| ಕೃಷ್ಣ ಎನಬಾರದೆ || ಪರಿಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಎನಬಾರದೆ || ದುರಿತ ರಾಶಿಗಳನು ತರಿದು ಬಿಸಾಡಲು| ಕೃಷ್ಣ ಎನಬಾರದೆ || ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ | ಕೃಷ್ಣ ಎನಬಾರದೆ ||

Thoughts & Reflections

0

No reflections shared yet. Be the first to share your thoughts!

Share your thought