Bhasaka
← Back to home

ಕೊಟ್ಟವರು ಸರಿಯೆ

Author: ಪುರಂದರದಾಸCategory: ಶ್ರೀಕೃಷ್ಣRaaga: ಪಹಾಡೀTaala: ಕವಾಲೀ
ಕೊಟ್ಟವರು ಸರಿಯೆ | ಕೊಡದೆ ಬಿಟ್ಟವರು ಸರಿಯೆ || ಇಕ್ಕಿದವರಿಗುಂಟು | ಮದದಲಿ ಸೊಕ್ಕಿದರೇನುಂಟು | ರಕ್ಕಸಾಂತಕ ಲಕುಮಿಪತಿಯ ಮರೆ - ಪೊಕ್ಕವರಾದ ಶಿಷ್ಟಭಕುತರಿಗೆ || ದೊರೆಯಾದರು ಸರಿಯೆ | ನಮಗೆ ತಿರುಕನಾದರು ಸರಿಯೆ | ಸರಸವಿರಸದಿಂ ನುಡಿದರೇನು ನರ - ಹರಿಪದಕಮಲವ ನಿರುತ ಭಜಿಪರಿಗೆ || ಪುಟ್ಟಿಸಿದ ಪ್ರಭುವು | ನಮಗೆ ಹೊಟ್ಟೆಗೆ ಕೊಡದಿಹನೆ | ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ ||

Thoughts & Reflections

0

No reflections shared yet. Be the first to share your thoughts!

Share your thought