Bhasaka
← Back to home

ಕ್ಷಾಂತಿ ಸಹನೆಯ

Author: ಸ್ವಾಮಿ ಶಾಸ್ತ್ರಾನಂದCategory: ಶ್ರೀಗುರುRaaga: ಅಢಾಣಾTaala: ತೇವರಾ
ಕ್ಷಾಂತಿ ಸಹನೆಯ ಶಾಂತ ಶೀತಲ ಕಾಂತಿಯಿಂದಲಿ ಬೆಳಗುವಾ ಶಶಿ | ಅಂತರಂಗದ ಭಕುತಿ ಭೂಷಣ ಸಂತರಾಜ್ಯದ ಚಕ್ರವರ್ತಿ || ಗುರುವೆ ನಿನ್ನಯ ಪರಮ ದೈವವು ಗುರುವಿನಾಣತಿ ಹಿರಿಯ ವೇದವು | ಗುರುವಿಗಾಳ್ತನ ಚರಮ ಸಾಧನ ಗುರುವಿಗೋಸುಗ ಧರಿತಪ್ರಾಣವು || ಕಾಮಕಾಂಚನ - ತ್ಯಾಗಿ ತಾಪಸಿ ಪ್ರೇಮಪೂರಿತ ಕರ್ಮಯೋಗಿ | ರಾಮಕೃಷ್ಣರ ದಿವ್ಯದಾಸ ರಾಮಕೃಷ್ಣಾನಂದ ನಮಿಪೆವು ||

Thoughts & Reflections

0

No reflections shared yet. Be the first to share your thoughts!

Share your thought