Bhasaka
← Back to home

ಚೆಲ್ಲಿದರು ಮಲ್ಲಿಗೆಯ

Category: ಶ್ರೀಶಿವ
ಚೆಲ್ಲಿದರು ಮಲ್ಲಿಗೆಯಾ... ಬಾಣಾಸೂರೇರಿ ಮ್ಯಾಲೆ.. ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಮಾದಪ್ಪ ಬರುವಾಗಾ.. ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಸಂಪಿಗೆ ಹೂವ್ನಂಗೇ ಇಂಪಾದೊ ನಿನ್ನ ಪರುಸೆ ಇಂಪಾದೊ ನಿನ್ನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ|| ಮಲ್ಲಿಗುವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ|| ಹೊತ್ತು ಮುಳಿಗಿದರೇನೂ ಕತ್ತಲಾದರೇನು ಅಪ್ಪಾ ನಿನ್ನ ಪರುಸೆ ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

Thoughts & Reflections

0

No reflections shared yet. Be the first to share your thoughts!

Share your thought