← Back to home
ಕ್ಷೀಣಪ್ರಾಣ ಹೀನತ್ರಾಣ
Author: ಸ್ವಾಮಿ ಶಾಸ್ತ್ರಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಮಾಲಕೌಂಸ್Taala: ದಾದರಾ
ॐ
ಕ್ಷೀಣಪ್ರಾಣ ಹೀನತ್ರಾಣ
ದೀನ ಭಾರತೀಯ ಜನಕೆ |
ಪ್ರಾಣ ಮಾನ ದಾನಗೈದ
ಮಾನವೇಂದ್ರ ಸ್ವಾಮಿಯೇ ||
ಸ್ಮರಿಸಿ ನಿಮ್ಮ ಹಿರಿಯ ಪದವ
ಧರಿಸಿ ಹೆಮ್ಮೆ ಧೈರ್ಯ ಬಲವ |
ಸಿರಿಯ ಆತ್ಮ ನೀವು ಎನುತ
ಮೊರೆದ ಅಭಯವಾಣಿಯೇ ||
ತ್ಯಾಗ ಸೇವೆ ನಿಮ್ಮ ನಾಡ
ಭಾಗ್ಯವೆಂದು ನಂಬಿ ನಡೆಯೆ |
ಭೋಗ ಯೋಗ ಸಿದ್ದವೆಂದ
ಯೋಗಿವರನೆ ವಂದಿಪೆ ||
Thoughts & Reflections
0No reflections shared yet. Be the first to share your thoughts!