Bhasaka
← Back to home

ಅಟ್ಟು ಇಕ್ಕದವರ ಮನೆಯ 

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಆಟತಾಳ
ಅಟ್ಟು ಇಕ್ಕದವರ ಮನೆಯ ||ಪ|| ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವ ಅಟ್ಟರೇನು ಅಡದಿದ್ದರೇನು ||ಅ|| ನಿಚ್ಚಣಿಗೆ - ದೋಟಿಗೆ ನಿಲುಕದ ಹಣ್ಣಿನ ವೃಕ್ಷ ನಿಚ್ಚ ನಿಚ್ಚವು ಬಾಗಿ ಫಲವಾದರೇನು ಔಚಿತ್ಯ ವಿದ್ಯೆಯನರಿಯದ ದೊರೆ ತಾನು ಮೆಚ್ಚಿದರೇನು ಮೆಚ್ಚದಿದ್ದರೇನು ||1|| ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದ ಏರಿ ಇದ್ದರೇನು ಪರ್ವತವಿದ್ದರೇನು ಶರೀರ ಸೌಖ್ಯ ಶಮನಕ್ಕಾಗದ ಹೆಣ್ಣು ಊರಲಿದ್ದರೇನು ತೌರೂರಲಿದ್ದರೇನು ||2|| ಉರಗಾದ್ರಿ ವಾಸ ನಾರಾಯಣಾದಿಕೇಶವನ ಚರಣಕಮಲವನು ಸೇರಿಕೊಳ್ಳದೆ ವರ-ಶಾಪವಿಲ್ಲದ ಬಣಗು ದೈವಗಳಿಗೆ ಶರಣೆಂದರೇನು ಶರಣೆನದಿದ್ದರೇನು? ||3||

Thoughts & Reflections

0

No reflections shared yet. Be the first to share your thoughts!

Share your thought