Bhasaka
← Back to home

ಅಡಿಗೆಯನು ಮಾಡಬೇಕಣ್ಣ

Author: ಕನಕದಾಸCategory: ವೈರಾಗ್ಯRaaga: ಪಂತುವರಾಳಿTaala: ಛಾಪುತಾಳ
ಅಡಿಗೆಯನು ಮಾಡಬೇಕಣ್ಣ- ನಾನೀಗ ಜ್ಞಾನ ದಡಿಗೆಯನು ಮಾಡಬೇಕಣ್ಣ ||ಪ|| ಅಡಿಗೆಯನ್ನು ಮಾಡಬೇಕು ಮಡಿಸಬೇಕು ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಲಿ ಮನೆಯ ಸಾರಿಸಿ ||ಅ|| ತನ್ನ ಗುರುವನ್ನು ನೆನೆಯಬೇಕಣ್ಣ ತನುಭಾವವೆಂಬ ಭಿನ್ನ ಕಲ್ಮಶವಳಿಯಬೇಕಣ್ಣ ಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚ ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||1|| ತತ್ವಭಾಂಡವ ತೊಳೆಯಬೇಕಣ್ಣ- ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನು ಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ ||2|| ಜನನ ಸೊಂಡಿಗೆ ಹುರಿಯಬೇಕಣ್ಣ- ನಿಜವಾಗಿ ನಿಂತು ತನುವು ತುಪ್ಪವ ಕಾಸಬೇಕಣ್ಣ ಕನಕಗಿರಿ ಕಾಗಿನೆಲೆಯಾದಿಕೇಶವನ ದಾಸ ಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ ||3||

Thoughts & Reflections

0

No reflections shared yet. Be the first to share your thoughts!

Share your thought