Bhasaka
← Back to home

ಅಭ್ಯಾಸವನು ಮಾಡಬೇಕು ಬಿಡದೆ

Author: ಕನಕದಾಸCategory: ಶ್ರೀಕೃಷ್ಣ
ಅಭ್ಯಾಸವನು ಮಾಡಬೇಕು ಬಿಡದೆ... ಶ್ರೀ ಗು ರುಭ್ಯೋನಮಃ ಎಂಬ ದಿವ್ಯನಾಮಂಗಳು ||ಪ|| ಕೇಶವ ನಾರಾಯಣ ಮಾಧವ ಗೋವಿಂದ ಭವ ನಾಶ ಭಕ್ತ ಹೃದಯ ಕಮಲಾಬ್ಜದ್ಯುಮಣಿ ದೋಷರಹಿತ ವಿಷ್ಣು ಮದುಸೂದನ ತ್ರಿವಿಕ್ರಮ ಸು ರೇಶ ಸರ್ವೋತ್ತಮ ದಿವ್ಯ ನಾಮಂಗಳನು ||1|| ವಾಮನ ಶ್ರೀಧರ ಹೃಷಿಕೇಶ........ ........ಪುಣ್ಯೋದರ ಹಿರಣ್ಯವಾಸ ದಾಮೋದರಾಮಲ ಕೌಸ್ತುಭರತ್ನ ವನಮಾಲಿ ರಾಮ ರಘುಪುಂಗವನ ನಾಮಂಗಳನು ||2|| ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ ಳಾಂಕ ಪಂಕೇಜ ಪತ್ರಾಯತಾಕ್ಷ ಕಿಂಕರ ರಕ್ಷಕ ಅನಿರುದ್ಧ ಪುರುಷೋತ್ತಮ ಶಂಕರಪ್ರಿಯ ಅಧೋಕ್ಷಜ ನಾಮಂಗಳಂ ||3|| ನಾರಸಿಂಹಾಚ್ಯುತ ಜನಾರ್ದನ ಉಪೇಂದ್ರ ಸಾರ ಭವಭಯ ಹರ ಕೃಷ್ಣ ವಿಶ್ವೋ ದ್ಧಾರ.................. ವನಮಾಲಿ ಆ ಮೂರುತಿಯ ನಾಮಂಗಳಂ ||4|| ಅಸಮಪಟು ಬಲಿಯ ಕಾಳೆಗದಿ ನುಂಗಿದ ನಿಜಪಾದ ರಸವಿರುದ್ಧ ತಾವಿಗೊದಗುವ ತೆರದೊಳು ಬಿಸಜಾಕ್ಷ ಕಾಗಿನೆಲೆಯಾದಿಕೇಶವ ಎನ್ನ ಅಸುವಳಿದು ಪೋಪಾಗ ಜಿಹ್ವೆಗೊದಗುವಂತೆ ||5||

Thoughts & Reflections

0

No reflections shared yet. Be the first to share your thoughts!

Share your thought