Bhasaka
← Back to home

ಅರಿತು ಭಜಿಪರ್ಯಾರಯ್ಯ ರಂಗಯ್ಯ

Author: ಕನಕದಾಸCategory: ಶ್ರೀಕೃಷ್ಣRaaga: ಮೋಹನTaala: ಆಟತಾಳ
ಅರಿತು ಭಜಿಪರ್ಯಾರಯ್ಯ ರಂಗಯ್ಯ ನಿನ್ನ ||ಪ|| ಸಿರಿದೇವಿಯು ಕಿರಿಬೆರಳಲ್ಲಿರುವ ಸೊಬಗನ್ನು ಅರಿಯಲಾರಳೊ ದೇವ ||ಅ|| ಇಂದಿರಾದೇವಿಯು ಅರಿಯಲಾರಳು ದೇವ ಬೃಂದಾರಕರೆಲ್ಲ ನಿಂದು ಯೋಚಿಪರು ನಂದ ತೀರ್ಥರ ಮತದೊಳಗೆ ಬಂದವರೆಲ್ಲ ಎಂದಿಗಾದರು ಪರಮಾನಂದ ಪೊಂದುವರು ||1|| ಮಾನವರು ಹೀನಮಾರ್ಗದೊಳು ಮುಳುಗಿಹರು ಜ್ಞಾನಿಗಳು ನಿಂದು ಧ್ಯಾನಿಪರು ನಿನ್ನ ನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣ ಕಾನನದೊಳು ಕಣ್ಣುಮುಚ್ಚಿ ಬಿಟ್ಟಿಹರೊ ||2|| ಜಲದೊಳಗಿನ ಕಪ್ಪೆ ಜಲದ ಸವಿಯರಿಯದು ಜಲದ ಸುಗಂಧವ ಜಲವರಿಯದು ನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆ ಸುಲಲಿತ ತತ್ತ್ವವನು ಸುಲಭ ಮಾರ್ಗದಿ ತೋರೊ ||3||

Thoughts & Reflections

0

No reflections shared yet. Be the first to share your thoughts!

Share your thought