Bhasaka
← Back to home

ಅಹಹ ಮೋಸ ಹೋದೆನಯ್ಯ

Author: ಕನಕದಾಸCategory: ವೈರಾಗ್ಯRaaga: ಪಂತುವರಾಳಿTaala: ಏಕತಾಳ
ಅಹಹ ಮೋಸ ಹೋದೆನಯ್ಯ ಹರಿಯೆ ನಿನ್ನ ನೆನೆಯದೆ ||ಪ|| ಇಹದ ಭೋಗ ನಿತ್ಯವೆಂದು ಮೆರೆದೆ ನಿನ್ನ ನೆನೆಯದೆ ||ಅ|| ಹೇಯವಾದ ದೇಹವನ್ನು ಶ್ಲಾಘನೀಯವೆಂದು ನಾಲ್ವರೊಡನು ಪಾಯದಿಂದ ಹೇಮದಂತೆ ಬಣ್ಣಗಟ್ಟಿ ಬಾಯ ಬಡಿದು ತಂದು ತಂದು ಕಾಯ ಕಳೆದೆನಲ್ಲದೆ ||1|| ಚಂಚಲತ್ವ ಬಲವು ಫಲವು ಜಾಲ ಕೋಪ ತಾಪದಿಂದ ವಂಚನಾರ್ಥ ಹಲವು ಕೆಲವು ಮಿಂಚಿನಂತೆ ಸುಳಿಸುತ ಸಂಚುಮಾಡಿ ಕಾಲನವರ ವಂಚನೆಗಳ ತಿಳಿಯದ್ಹೋದೆ ಪಂಚಬಾಣನಯ್ಯ ಕಾಯೊ ಎನ್ನವಗುಣಗಳೆನೆಣಿಸದೆ ||2|| ದಿಕ್ಕುದೆಸೆಯದಾರೊ ಅಕ್ಕರದಿಂದಾರ ಕರೆವೆ ಉಕ್ಕಿ ಸವಿದು ಮನುಜರೊಡನೆ ಸೊಕ್ಕಿ ದಿನವ ಕಳೆದೆನೆನಗೆ ತಕ್ಕುದಾಯಿತಯ್ಯ ಕೇಳು ಒಡೆಯ ಆದಿಕೇಶವ ||3||

Thoughts & Reflections

0

No reflections shared yet. Be the first to share your thoughts!

Share your thought