Bhasaka
← Back to home

ಗೋವಿಂದ ಗೋವಿಂದ

Author: ಪುರಂದರದಾಸCategory: ಶ್ರೀಕೃಷ್ಣRaaga: ಪಹಾಡೀTaala: ಕವಾಲೀ
ಗೋವಿಂದ ಗೋವಿಂದ ಅತಿ ಆನಂದ ಸಕಲ ಸಾಧನ ನಿನ್ನಾನಂದ || ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ | ನಿರ್ಮಲಾತ್ಮಕನಾಗಿ ಇರುವುದೇ ಆನಂದ || ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ | ಈ ಪರಿ ಮಹಿಮೆಯ ತಿಳಿಯೋದೆ ಆನಂದ || ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ | ಹಿಂಗದೆ ದಾಸರ ಸಲಹೋದೆ ಆನಂದ ||

Thoughts & Reflections

0

No reflections shared yet. Be the first to share your thoughts!

Share your thought