Bhasaka
← Back to home

ಆತನೇ ಪರಮಾತ್ಮ ಪರತತ್ತ್ವ

Author: ಕನಕದಾಸCategory: ಶ್ರೀಕೃಷ್ಣRaaga: ಸಾವೇರೀTaala: ಝಂಪೆತಾಳ
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ ದರಿತು ಪೂಜಿಸಬಾರದೆ ಆತನಾ ಪದತೋಯ ಶಿರಸಾ ವಹಿಸಿ ಪಾನ ದಿಂದಧಿಕರಾದರು- ಜೀವಿಗಳು ಮನುಜ ||ಪ|| ದಾನಮುಖದಲಿ ಬಲಿಯ ಬೇಡಿ ಭುವನವನೊಂದು ಪದದಿ ಅಳೆದವನಾವನು ಮಾನದಾನವನ ನಾಲ್ಮೈಯ ಮುಡಿಗಟ್ಟಿವನ ಮಾನ ಉಳುಹಿದನಾವನು ಮಾನ ಮರುಳಾದವನ ಮರ್ದಿಸಿದ ಬ್ರಹ್ಮ ಹತ್ಯೆ ಮಹಿಗೆ ಇಳುಹಿದನಾವನು ಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದು ಪಾದ ಹೊದಿಸಿದನಾವನು? ||1|| ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನು ಕುಟ್ಟಿ ಹಾಕಿದನಾವನು ದಿಟ್ಟಿವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನು ಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮ ಗುಟ್ಟಿನಲಿ ನೆನೆಸಿದುದಾವನು ಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನು ಬಿಟ್ಟೋಡಿಸಿದನಾವನು? ||2|| ವೇದಮುಖದವನ ಅತಿ ಮೋದದಲಿ ಪುಟ್ಟಿಸಿದ ಆದಿಮೂರುತಿ ಆವನು ನಾದದಲಿ ಅಖಿಳ ಮಹಿ ನಟಿಸುವ ಮಹಾತ್ಮಕ ನಾದ ಸಾತ್ತ್ವಿಕನಾವನು ಆದಿಯಲಿ ಜಗಗಳಿರದಂದು ವಟ ಪತ್ರಶಯನ ನಾದ ಮೂಲವದಾವನು ಆದಿಕೇಶವ ದೈವವಲ್ಲದಿನ್ನಿಲ್ಲವೆಂದು ಆಗಮವು ನುಡಿವುದಾವನನು? ||3||

Thoughts & Reflections

0

No reflections shared yet. Be the first to share your thoughts!

Share your thought