Bhasaka
← Back to home

ಆನೆ ಬಂದಿದೆ ಇದಿಗೊ ಮದ್ದಾನೆ 

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆಟತಾಳ
ಆನೆ ಬಂದಿದೆ ಇದಿಗೊ ಮದ್ದಾನೆ ||ಪ|| ಜ್ಞಾನಿಗಳೊಳಾಡುವ ಮದ್ದಾನೆ ||ಅ|| ದೇವಕಿಯೊಳು ಪುಟ್ಟಿದಾನೆ- ವಸು ದೇವನ ಪೆಸರೊಳೈತಂದ ಮದ್ದಾನೆ ಶ್ರೀ ವಾಸುದೇವನೆಂಬಾನೆ- ಗೋಪಿ ದೇವಿಯ ಗೃಹದೊಳಾಡುವ ಪುಟ್ಟಾನೆ ||1|| ನೀಲವರ್ಣದ ನಿಜದಾನೆ- ಸ್ವರ್ಣ ಮಾಲೆಗಳಿಟ್ಟು ಮೆರೆವ ಚಲುವಾನೆ ಶ್ರೀಲೋಲನೆನಿಪ ಪಟ್ಟದಾನೆ- ದುಷ್ಟ ಕಾಳಿಂಗನ ಪೆಡೆಯ ಮೆಟ್ಟಿ ತುಳಿದಾನೆ ||2|| ಬಾಲೇಂದು ಮುಖದ ಮರಿಯಾನೆ- ಕದ್ದು ಪಾಲನ್ನು ಕುಡಿದ ಮರಿಯಾನೆ ಕೈಲಿ ಗಿರಿಯನೆತ್ತಿದಾನೆ ಕಾಳ್ಗಿಚ್ಚನ್ನು ನುಂಗಿದ ಪಟ್ಟದಾನೆ ||3|| ಧೇನುಕಾಸುರನ ಕೊಂದಾನೆ ತನಗೆ ಜೋಡಿಲ್ಲದಿಹ ನಿಜದಾನೆ ಮಾನವರಿಗೆಲ್ಲ ಸಿಲ್ಕದಾನೆ ಶೌನಕಾದಿಗಳೊಂದಿಗಿಪ್ಪಾನೆ ||4|| ಮಲ್ಲರೊಡನೆ ಗೆಲಿದಾನೆ- ಕಡು ಖುಲ್ಲ ಕಂಸನ ಕೆಡಹಿದಾನೆ- ವಿದ್ಯೆ ಸಾಂದೀಪ ರಲಿ ಕಲಿತ ಮರಿಯಾನೆ ಸಲೆ ಭಕ್ತರ ಕಾವ ಪುಟ್ಟಾನೆ ||5|| ತರಳೆ ರುಕ್ಮಿಣಿಯ ತಂದಾನೆ- ಬಹು ಕರುಣದಿಂ ಪಾಂಡವರ ಪೊರೆದಾನೆ ವರ ವೇಲಾಪುರದೊಳಿಪ್ಪಾನೆ ಸಿರಿಯಾದಿಕೇಶವನೆಂಬ ಮದ್ದಾನೆ ||6||

Thoughts & Reflections

0

No reflections shared yet. Be the first to share your thoughts!

Share your thought