Bhasaka
← Back to home

ಆನೆಯ ನೋಡಿರಯ್ಯ ನೀವೆಲ್ಲರು

Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ತ್ರಿಪುಟತಾಳ
ಆನೆಯ ನೋಡಿರಯ್ಯ ನೀವೆಲ್ಲರು ಆನಂದ ಪಡೆಯಿರಯ್ಯ ||ಪ|| ತಾನು ತನ್ನವರೆಂಬ ಮಾನವರ ಸಲಹಿದ ||ಅ|| ಪಾಂಡು ಚಕ್ರೇಶನ ಸುತರಿಗೊಲಿದಾನೆ ಗಂಡುಗಲಿ ಮಾಗಧನ ಒರಸಿದಾನೆ ಹಿಂಡು ಗೋವಳರೊಳಗೆ ಹಿರಿಯನ ಕಳೆಯದಾನೆ ಲಂಡರಿಗೆ ಎದೆಗೊಡುವ ಪುಂಡಾನೆ ||1|| ಬಾಲಕನ ನುಡಿಗೇಳಿ ಖಳನ ಸೀಳಿದಾನೆ ಪಾಲುಂಡು ವಿದುರನ ಸಲಹಿದಾನೆ ಲೋಲಾಕ್ಷಿ ಮಾನಭಂಗಕ್ಕಕೊದಗಿದಾನೆ ಖೂಳ ಶಿಶುಪಾಲನನು ಸೀಳಿದಾನೆ ||2|| ಅಜಮಿಳನಿಗೆ ನಿಜಪದವಿಯ ಕೊಟ್ಟಾನೆ ಕುಜನರೆಲ್ಲರನು ಒರಗಿಸಿದಾನೆ ಅಜಪಿತ ಕಾಗಿನೆಲೆಯಾದಿಕೇಶವಾನೆ ತ್ರಿಜಗವಲ್ಲಭ ತಾನು ಭಜಕರ ವಶವಾನೆ ||3||

Thoughts & Reflections

0

No reflections shared yet. Be the first to share your thoughts!

Share your thought