Bhasaka
← Back to home

ಆರಿಗಳವಲ್ಲಾತ್ಮ ಯೋಗಸಿದ್ಧಿ

Author: ಕನಕದಾಸCategory: ಶ್ರೀಕೃಷ್ಣRaaga: ಶಂಕರಾಭರಣTaala: ಆಟತಾಳ
ಆರಿಗಳವಲ್ಲಾತ್ಮ ಯೋಗಸಿದ್ಧಿ ಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ ||ಪ|| ರಜಸು-ತಾಮಸವೆಂಬ ರಯವನೆಲ್ಲವ ಕಳೆದು ಗಜಬಜಿಸುವ ಪಂಚಭೂತಗಳ ರಜನಿಗೆ ಸಿಲ್ಕದೆ ಪರಬ್ರಹ್ಮನ ಬಲು ನಿಜವ ತಿಳಿಯಬಲ್ಲ ನಿರ್ವಾಣಗಲ್ಲದೆ ||1|| ಭಿನ್ನ ಭೇದಗಳೆಂಬ ಬಲು ಸಂಶಯ ಕಳೆದು ತನ್ನೊಳಗೆ ತಾ ತಿಳಿದು ತಾರಕಬ್ರಹ್ಮವ ಚೆನ್ನಾಗಿ ನೀ ನೋಡು ಚೆಲುವ ಕಂಗಳಿಂದ ತನ್ನಗ್ನಿಯೊಳಗಿರುವ ಪ್ರೌಢರಿಗಲ್ಲದೆ ||2|| ಅಕಾರ ಉಕಾರ ಮಕಾರ ಎಂತೆಂಬ ಓಂಕಾರಕೆ ಕೂಡಿ ಎರಡಿಲ್ಲದ ಸಾಕಾರ ಕಾಗಿನೆಲೆಯಾದಿಕೇಶವನ ಆಕಾರದೊಡನಾಡುವರಿಗಲ್ಲದೆ ||3||

Thoughts & Reflections

0

No reflections shared yet. Be the first to share your thoughts!

Share your thought