Bhasaka
← Back to home

ಆರು ಬದುಕಿದರಯ್ಯ ಹರಿ ನಿನ್ನ ನಂಬಿ 

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ತ್ರಿಪುಟತಾಳ
ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ ||ಪ|| ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ||ಅ|| ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆ ಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ ||1|| ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನ ಸರಸದಿಂ ಮಗಳ ಗಂಡನ ಕೊಲಿಸಿದೆ ಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ನರಕಾಸುರನ ಹೆಂಡಿರನು ತಂದೆ ||2|| ತಿರಿದುಂಬ ದಾಸರ ಕೈ ಕಪ್ಪ ಕೊಂಬ ಮರ್ಮ ತಿರುಮಲಾಚಾರ್ಯ ಶ್ರೀ ಗುರುವೆ ಬಲ್ಲ ವರ ಕಾಗಿನೆಲೆಯಾದಿಕೇಶವನ ಭಜಿಸಿದರೆ ತಿರಿವೆನೆಂದರು ತಿರುಪೆ ಕೂಳ್ ಪುಟ್ಟದೈ ಕೃಷ್ಣ ||3||

Thoughts & Reflections

0

No reflections shared yet. Be the first to share your thoughts!

Share your thought